Thursday, 7 December 2006

ಲವ್ವಿದು ಪ್ಯೂರಿದೆ ಬಾರೆ

ಲವ್ವಿದು ಪ್ಯೂರಿದೆ ಬಾರೆ
ಇದಕ್ಕೊಡೆದರೆ ಕ್ಯೂರಿಲ್ಲ ನೀರೆ
ಕ್ಯಾಟ್ ವಾಕಲ್ಲಿ ಬಂದಿಲ್ಲಿ ಕೂರೆ

ಈ ಮನಸಿದು ಸ್ಮೂತಿದೆ ಬಾರೆ
ಇದಕೆ ನೈಫಾಕ ಬೇಡವೇ ನೀರೆ
ಈ ಮನಸಲೇ ನೆಲೆಸು ನೀ ಬಾರೆ

ಈ ಜಗಕೆ ನನ ಮಾತು ಜೋರೆ
ಆದರೆ ಹೃದಯದಿ ಮಿಲ್ಕಿನ ನೊರೆ
ನೀನದರಲಿ ಕೆನೆಯಾಗು ಬಾರೆ

ನನ ಲವ್ವಿಗೆ ಲವ್ವಾಗು ಬಾರೆ
ನನ ಸೂಟಿಗೆ ಟೈಯಾಗು ಬಾರೆ
ನನ್ನ ಹಾರ್ಟ್ ಗೆ ಬೀಟಾಗು ಬಾರೆ

ಮಿಲನ

ಮಿಲನ ಆ ಮಿಲನ, ನಿನ್ನ ಕಣ್ಣಿನ ಆ ಮಿಲನ
ಹೊಡೆಯಿತು ಎನ್ನದೆಗೆ ಬಾಣ
ಚೂರಾಯಿತು ಈ ಪ್ರಾಣ

ನಿಜವೋ ಆ ನೋಟ ಮಜವೋ
ತಿಳಿಯದಾದೆನು ನಾನಂದು
ಒಲವ ತೋರಬಾರದ ನೀನಿಂದು

ನನ ಕಲ್ಲಿನ ಆ ಹೃದಯ
ಕಂಪಿಸಿದೆ ಇಂದು
ನಿನ ಒಲವಲಿ ತಾ ಮಿಂದು
ಹಾಡಿದೆ ಈ ಕವನ

ನನ್ನ ತನು ಮನದ ನೀರೆ
ದಯೆ ತೋರುತ ನೀ ಬಾರೆ
ನನ ಕನಸಲೂ ನೀ ಬಾರೆ
ನನ ನನಸಲೂ ಎರೆ ಧಾರೆ