ತಾಯ ಒಡಲೊಳು
ಭಾವದ ನೂರೆಂಟು ಕೊಠಡಿ
ಜೀವ ನಾವಿಗೆಯಲಿ
ದಿನವು ಭಾವ ಲಹರಿ
ಭೀಕರ ಕಾರ್ಮೋಡಗಳ ಬಿಟ್ಟು ಓಡಿ,
ತೆಳು ಮೋಡವಾರಿತು
ಒಣಭೂಮಿ ನೋಡಿ
ವಾತ್ಸಲ್ಯವೆಂಬುದು ಅಬ್ಬರವು ಅಲ್ಲ
ಹನಿ ನೀರ ಕುಡಿದ ಕುಡಿಯೇ ಇದ ಬಲ್ಲ
ಭುವಿಗೆ ಕಾಲನೂರಿ, ಭಾನ್ದಳವನು ತೋರಿ,
ಹಕ್ಕಿಯಾಗೆನ್ದಳು ತಾಯಿ ನಮಗೆ
ಕೋಳಿ-ಕೋಗಿಲೆ, ಕಾಗೆ-ಗುಬ್ಬಿ, ಭಾತು-ಹದ್ದು
ಆರಸಿಕೋ ಮಗು ನಿನಗ್ಯಾವುದು ಬೇಕು ಅದೇ ಮದ್ದು
ತಾಯೆ, ನಿನ್ನ ನಗೆ ಹಲವು ಬಗೆ
ಇಲ್ಲಿ ಜನ್ಮವದೆ ಧನ್ಯವು;
ಸುರಿದ ಮಳೆ, ಹರಿವ ಜಲ,
ಭಾಷೆ ಅದು ಜೊನ್ನ ರಾಶಿ
ಬಿಡು ಉಳಿಸುವ ಮಾತ;
ಮುಂದಿರುವುದು ಬೆಳಸುವ ಮಾತೊಂದೆ