Friday, 12 December 2025

ದೀಪದ ಹಣ್ಣು


ನಿಧಿಯಿದೆ ಮನೆಯೊಳಗೆ,

ಅಗೆಯುವವರಿಲ್ಲ.

ಬೆಳಕಿದೆ ಜಗದೊಳಗೆ,

ಕೊಯ್ವವರೇ ಇಲ್ಲ.


ಹದವಿರುವ ಹೃದಯವಿದೆ,

ಮೊಗ ನಗಲೆ ಇಲ್ಲ.

ಜಗದಾತ್ಮನ ಇಹವು,

ಸುಖ ಕಾಣಲಿಲ್ಲ.


ದೇವನಿರುವನೋ ಏನೋ,

ಜನ ತಿಳಿಯಲಿಲ್ಲ.

ಮಲಗಿರುವ ಮನದ ದೈವ,

ನೇಳಬೇಕಲ್ಲ.


ಇರುವುದನ ಪ್ರಶ್ನಿಸುವ,

ಎದೆಗಾರಿಕೆ ಇಲ್ಲ.

ತಿಳುವಳಿಕೆ ಇಲ್ಲದ ಬಾಳು,

ಬಾಳಾಯಿತಲ್ಲ.


ಬದಲಾವಣೆ ಮತ್ತೆ,

ತಿರುಗಿ ಬರಲಣ್ಣ.

ಭಾವಾಗ್ನಿ ಹುಕ್ಕಿ,

ತೆರೆಯಲೀ ಕಣ್ಣ.


ಕಂಪ ಸೂಸಲಿ,

ಭೂ ತಾಯ ಮಣ್ಣು.

ಪ್ರತಿ ಜೀವಿಗೆ,

ಸಿಗಲಿ ದೀಪದ ಹಣ್ಣು.

ನಾನಿರುವೆ, ನಾ ಬರುವೆ ಜೊತೆಗೆ

 ಕಂಬನಿ ಮಳೆಯಿದೆ ಮೃದುವೆ, ತಾಳು ಭಯವೇಕೆ ನಾನಿರುವೆ

ಮುಚ್ಚುವೆ ಸೆರಗಲಿ ಬಂದು, 

ಬೆಚ್ಚಗಿರುವೆಯಂತೆ ಮುಂದೆ

ಮನುವು ನೊಂದರೆ, ಜಗವು ತಿಳಿವುದು
ದುಡಿದು ಸೋತರೆ, ದೇಹ ಬಲಿವುದು
ವ್ಯಾಪಾರವೆಂದು ತಿಳಿ, ವ್ಯಾಯಾಮವೆಂದು ತಿಳಿ
ಕಷ್ಟ ನಷ್ಟ ಮರೆತುಬಿಡು ನಾಳೆ ನಿನ್ನದೇ

ಕಾಯುತ ನಿಲ್ಲಬೇಡ ನಾ ಬರುವೆನೆಂದು
ನೀ ಯಾರೋ ನಾ ಅವನೆ
ಮಂದೆಯೇ ನೆನೆಯುತಿದೆ, ನೀ ಸಾಗು
ನೀನಡೆದರೆ ನಾನಿರುವೆ, ನಾ ಬರುವೆ ಜೊತೆಗೆ

Friday, 22 November 2013

ನನ್ನ ಒಡವೆ




ಇಂತದೊಂದು ಒಡವೆ ನನಗೆ
ಎಂತ ಬಂದು ಸೇರಿತೊ
ಮಂಥನಗಳ ಹೊಡೆತದಲ್ಲಿ
ನನ್ನ ಹೇಗೆ  ಸೇರಿತೊ





ಜೀವನದಲೆ ಅಸ್ತಿರದಲಿ
ಭಾವ ತೊಳೆವ ದುಸ್ಥಿತಿಯಲಿ
ಮಸ್ತಕದೊಲೆ ಕಳವಳದಲಿ
ಪುಸ್ತಕದೊರೆ ಭಾರದಲ್ಲಿ
        ಇಂತದೊಂದು ಒಡವೆ ನನಗೆ
        ಎಂತ ಬಂದು ಸೇರಿತೊ
        ಮಂಥನಗಳ ಹೊಡೆತದಲ್ಲಿ
        ನನ್ನ ಹೇಗೆ  ಸೇರಿತೊ

ಬಳುವಳಿಯಲಿ  ಬಂದುದಲ್ಲ
ಯಾರೋ ಕಳೆದುಕೊಂಡುದಲ್ಲ
ಬೆಳೆಸಿ ಬಳಸಿ ಪಡೆದುದಲ್ಲ
ಕೊಳ್ಳದಂತ, ಪಡೆಯದಂತ, ಬೆಳೆಯದಂತ ಒಡವೆ ಇದು
        ಇಂತದೊಂದು ಒಡವೆ ನನಗೆ
        ಎಂತ ಬಂದು ಸೇರಿತೊ
        ಮಂಥನಗಳ ಹೊಡೆತದಲ್ಲಿ
        ನನ್ನ ಹೇಗೆ  ಸೇರಿತೊ

Friday, 19 July 2013

ಮನುಷ್ಯನಾಗಿ ಹುಟ್ಟಿದ ಮನುಷ್ಯ ಮನುಷ್ಯನಾಗಿಯೇ ಬಾಳಲು ಮನಸ್ಸು ಶಾಂತವಾಗಿರಬೇಕು 

Sunday, 25 December 2011

ಹೊಸ ದಾರಿ, ಹೊಸ ವರ್ಷ

ದಿಟವಾಗಲಿ ಕರೆ 
ಪುಟಿದೇಳಲಿ ಮನ 
ತಡವೇತಕೆ ನಿಲುವು 
ಮನದೇಗುಲ ಬೆಳಕಾಗಲಿ 
ಜಗದೆಲ್ಲಡೆ ಒಲವು 

ಮಡುಕಟ್ಟಿದ ಹಳೆನೀರದು 
ಮಡಿಯಾಗಲಿ ಬೆಂದು 
ತನುವಾಗಲಿ ಹದ ಭೂಮಿಯು 
ಹೊಸ ನೀರಲಿ ಮಿಂದು 

ಅದೇ ಸೂರ್ಯಮ, ಅದೇ ಚಂದ್ರಮ 
ಇದೆ ಭೂಮಿಯು ಸಹಜ 
ಬದಲಾವಣೆ  ಬೇಕಾಗಿದೆ 
ಮನುರಾಜನ ತನುಜ 

ನಿಜದರ್ಥದಿ ಪರಕೀಯವು, ಪರಕಾಯವು 
ಪರದೈವವೆ ಇಲ್ಲ
ಅವ ನಮ್ಮವ, ಜಗ ನಮ್ಮದು 
ಅನಿಕೇತನರೆಲ್ಲ 

  

Tuesday, 1 November 2011

ನಾಡ ಬೆಳಸಿ

ತಾಯ ಒಡಲೊಳು 
ಭಾವದ ನೂರೆಂಟು ಕೊಠಡಿ 
ಜೀವ ನಾವಿಗೆಯಲಿ 
ದಿನವು ಭಾವ ಲಹರಿ 

ಭೀಕರ ಕಾರ್ಮೋಡಗಳ ಬಿಟ್ಟು ಓಡಿ, 
ತೆಳು ಮೋಡವಾರಿತು   
ಒಣಭೂಮಿ ನೋಡಿ 
ವಾತ್ಸಲ್ಯವೆಂಬುದು ಅಬ್ಬರವು ಅಲ್ಲ 
ಹನಿ ನೀರ ಕುಡಿದ ಕುಡಿಯೇ ಇದ ಬಲ್ಲ 

ಭುವಿಗೆ ಕಾಲನೂರಿ, ಭಾನ್ದಳವನು ತೋರಿ,
ಹಕ್ಕಿಯಾಗೆನ್ದಳು ತಾಯಿ ನಮಗೆ 
ಕೋಳಿ-ಕೋಗಿಲೆ, ಕಾಗೆ-ಗುಬ್ಬಿ, ಭಾತು-ಹದ್ದು 
ಆರಸಿಕೋ ಮಗು ನಿನಗ್ಯಾವುದು ಬೇಕು ಅದೇ ಮದ್ದು 


ತಾಯೆ,  ನಿನ್ನ ನಗೆ ಹಲವು ಬಗೆ
ಇಲ್ಲಿ ಜನ್ಮವದೆ ಧನ್ಯವು;
ಸುರಿದ ಮಳೆ, ಹರಿವ ಜಲ,
ಭಾಷೆ ಅದು ಜೊನ್ನ ರಾಶಿ 
ಬಿಡು ಉಳಿಸುವ  ಮಾತ; 
ಮುಂದಿರುವುದು ಬೆಳಸುವ ಮಾತೊಂದೆ  


Wednesday, 31 August 2011

ಹುಡುಕಾಟ

ನನ್ನ ನಾ ಕಾಣಬೇಕೆಂದು ಬೆಳಗ್ಗಯೇ ಎದ್ದು 
ಪೂರ್ವಾಭಿಮುಖವಾಗಿ ಭೂಮಿಯ ತುದಿಯವರೆಗೆ ಹೋಗಬೇಕೆಂದು ನಡೆದೆ
ಸೂರ್ಯ ಮೇಲೆರುತ್ತಲಿದ್ದ, ದಿಕ್ಕು ಬದಲಿಸಬೇಕಾಯ್ತು