
ಇಂತದೊಂದು ಒಡವೆ ನನಗೆ
ಎಂತ ಬಂದು ಸೇರಿತೊ
ಮಂಥನಗಳ ಹೊಡೆತದಲ್ಲಿ
ನನ್ನ ಹೇಗೆ ಸೇರಿತೊ
ಜೀವನದಲೆ ಅಸ್ತಿರದಲಿ
ಭಾವ ತೊಳೆವ ದುಸ್ಥಿತಿಯಲಿ
ಮಸ್ತಕದೊಲೆ ಕಳವಳದಲಿ
ಪುಸ್ತಕದೊರೆ ಭಾರದಲ್ಲಿ
ಇಂತದೊಂದು ಒಡವೆ ನನಗೆ
ಎಂತ ಬಂದು ಸೇರಿತೊ
ಮಂಥನಗಳ ಹೊಡೆತದಲ್ಲಿ
ನನ್ನ ಹೇಗೆ ಸೇರಿತೊ
ಬಳುವಳಿಯಲಿ ಬಂದುದಲ್ಲ
ಯಾರೋ ಕಳೆದುಕೊಂಡುದಲ್ಲ
ಬೆಳೆಸಿ ಬಳಸಿ ಪಡೆದುದಲ್ಲ
ಕೊಳ್ಳದಂತ, ಪಡೆಯದಂತ, ಬೆಳೆಯದಂತ ಒಡವೆ ಇದು
ಇಂತದೊಂದು ಒಡವೆ ನನಗೆ
ಎಂತ ಬಂದು ಸೇರಿತೊ
ಮಂಥನಗಳ ಹೊಡೆತದಲ್ಲಿ
ನನ್ನ ಹೇಗೆ ಸೇರಿತೊ
No comments:
Post a Comment