Friday, 12 December 2025

ದೀಪದ ಹಣ್ಣು


ನಿಧಿಯಿದೆ ಮನೆಯೊಳಗೆ,

ಅಗೆಯುವವರಿಲ್ಲ.

ಬೆಳಕಿದೆ ಜಗದೊಳಗೆ,

ಕೊಯ್ವವರೇ ಇಲ್ಲ.


ಹದವಿರುವ ಹೃದಯವಿದೆ,

ಮೊಗ ನಗಲೆ ಇಲ್ಲ.

ಜಗದಾತ್ಮನ ಇಹವು,

ಸುಖ ಕಾಣಲಿಲ್ಲ.


ದೇವನಿರುವನೋ ಏನೋ,

ಜನ ತಿಳಿಯಲಿಲ್ಲ.

ಮಲಗಿರುವ ಮನದ ದೈವ,

ನೇಳಬೇಕಲ್ಲ.


ಇರುವುದನ ಪ್ರಶ್ನಿಸುವ,

ಎದೆಗಾರಿಕೆ ಇಲ್ಲ.

ತಿಳುವಳಿಕೆ ಇಲ್ಲದ ಬಾಳು,

ಬಾಳಾಯಿತಲ್ಲ.


ಬದಲಾವಣೆ ಮತ್ತೆ,

ತಿರುಗಿ ಬರಲಣ್ಣ.

ಭಾವಾಗ್ನಿ ಹುಕ್ಕಿ,

ತೆರೆಯಲೀ ಕಣ್ಣ.


ಕಂಪ ಸೂಸಲಿ,

ಭೂ ತಾಯ ಮಣ್ಣು.

ಪ್ರತಿ ಜೀವಿಗೆ,

ಸಿಗಲಿ ದೀಪದ ಹಣ್ಣು.

ನಾನಿರುವೆ, ನಾ ಬರುವೆ ಜೊತೆಗೆ

 ಕಂಬನಿ ಮಳೆಯಿದೆ ಮೃದುವೆ, ತಾಳು ಭಯವೇಕೆ ನಾನಿರುವೆ

ಮುಚ್ಚುವೆ ಸೆರಗಲಿ ಬಂದು, 

ಬೆಚ್ಚಗಿರುವೆಯಂತೆ ಮುಂದೆ

ಮನುವು ನೊಂದರೆ, ಜಗವು ತಿಳಿವುದು
ದುಡಿದು ಸೋತರೆ, ದೇಹ ಬಲಿವುದು
ವ್ಯಾಪಾರವೆಂದು ತಿಳಿ, ವ್ಯಾಯಾಮವೆಂದು ತಿಳಿ
ಕಷ್ಟ ನಷ್ಟ ಮರೆತುಬಿಡು ನಾಳೆ ನಿನ್ನದೇ

ಕಾಯುತ ನಿಲ್ಲಬೇಡ ನಾ ಬರುವೆನೆಂದು
ನೀ ಯಾರೋ ನಾ ಅವನೆ
ಮಂದೆಯೇ ನೆನೆಯುತಿದೆ, ನೀ ಸಾಗು
ನೀನಡೆದರೆ ನಾನಿರುವೆ, ನಾ ಬರುವೆ ಜೊತೆಗೆ