Thursday, 11 March 2010

ಮಗು ಮತ್ತು ಮನೆಯ ಪರಿಸರ



ದಟ್ಟವಾದ ಕಾಡಿನಲ್ಲಿ ಪುಟ್ಟದೊಂದು ಮನೆಯ ಕಟ್ಟಿ
ಚಿಕ್ಕ ಪುಟ್ಟ ಮಕ್ಕಳನ್ನು ಬಿಟ್ಟುಬಿಟ್ಟರು

ಪುಟ್ಟಪುಟ್ಟ ಮಕ್ಕಳೆಲ್ಲ ಬೆಟ್ಟದಂತೆ ದೊಡ್ಡದಾಗಿ
ಕಟ್ಟುಪಾಡು ಇಲ್ಲ ದಂತೆ ಬೆಳದು ಬಿಟ್ಟರು

ಅಡವಿ ಜನಗಳಂತೆ ಅವರು ವಕ್ರವಾದ ಹಾದಿಯಲ್ಲಿ
ಕೆಟ್ಟದಾಗಿ ಓಡಿ ಓಡಿ ಬಿದ್ದುಬಿಟ್ಟರು

ಇದನು ತಿಳಿದ ತಂದೆ ತಾಯಿ, ತಪ್ಪ ತಿಳಿದು ನೊಂದು ನೊಂದು
ಬುದ್ಧಿ ಮಾತಾ ಹೇಳಿ ಹೇಳಿ ನೆಟ್ಟಗಾದರು

ಎದೆಯ ಅನುರಾಗ

ಅನುರಾಗ ತುಂಬಿ ಬಂತು, ಈ ಜಗಕೆ ಹೂಮಳೆಯ ತಂತು
ಹೃದಯದಲಿ ಜೇನನಿಯ ತುಂಬಿ, ಸಂತಸದಿ ಕಂಬನಿಯ ತಂತು

ಕಾಲ್ಗಲವು ಗೆಜ್ಜೆ ಕಟ್ಟಿದಂತೆ, ಕುಣಿದಿರಲು ನೆಲವು ನಡುಗುವಂತೆ
ಕಂಪಿಸಿದೆ ಈ ನನ್ನ ಹೃದಯ ತನ್ನ ಮನವು ಕೇಳಿದಂತೆ

ಕಣ್ಗಲವು ಆ ತಾರೆಯಂತೆ ಮಿನುಗುತಲಿ ಬೆಳಕ ಸೂಸುವಂತೆ
ಭಾನ ಚಂದ್ರಮನ ಕೂಡಿ ತಂಪಾಗಿ ಬೆಳಗುವಂತೆ
ನಲಿಯುತಿದೆ ಈ ನನ್ನ ಮನವು ನರ್ತಿಸುವ ನವಿಲಿನಂತೆ

ಹಾರಿದೆ ಈ ನನ್ನ ಮನವು ನಲಿವ ಹಕ್ಕಿಯಂತೆ
ಹುಡುಕುತಲಿ ಆ ನಿನ್ನ ಒಲವ ಶಿವನ ಭಕ್ತನಂತೆ
ಚುಂಬಿಸಿದೆ ಹೃದಯ ನಿನ್ನ ನೆನಪ, ನೇಸರನು ಜಲವ ಮುಟ್ಟುವಂತೆ

ಮನಕೆ ಬೇಡಿಯಿರಲಿ


ಮನವು ಜಗವ ಕಂಡು ನಗುತಿದೆ
ಜಗ ಹೃದಯ ಭಾವ ಕಂಡು ನಗುತಿದೆ
ಅಳುವ ಸರದಿ ಯಾರಿಗಿದೆಯೋ ಮುಂದೆ
ಮನಕೆ ಬೇಡಿಯಿರಲಿ

ಜಗದಿ ನೂರು ನೋವುಗಳುಂಟು
ನಗುವು ತೋರಿಕೆ ತಾನು
ದುಗುಡ ಎಲ್ಲಿದೆಯೋ ಅರಿಯೆ
ಮನಕೆ ಬೇಡಿಯಿರಲಿ

ಬದುಕು ಓಡುವ ನೀರು
ಮನವು ಜೀವದ ಮೀನು
ರೆಕ್ಕೆ ಬಡಿಯುವ ಮುನ್ನ
ಮನಕೆ ಬೇಡಿಯಿರಲಿ

ವಿಧಿಯ ಗೊಂಬೆಯು ನಾವು
ಒಳಿದ ಮಾಡದಿರೇನು
ಕೆಡುಕ ಮಾಡದಲೇನೇ ಎಂದು
ಮನಕೆ ಬೇಡಿಯಿರಲಿ

ಶುಭಂ

ನೋಟ ನೋಟದಿ ಮನವು ಮಿಡಿದವು
ಆ ಮಾತಿನಲ್ಲಿಯೇ ತನುವು ಕುಣಿದವು
ಹೃದಯ ಅರಳುತ ತುಂಬು ಒಲವ ಪಡೆದವು

ಯುಗಾದಿಯಲ್ಲಿ ಒಲವ ಗಿಡವು ಚಿಗುರಿತು
ಗೌರಿಯಲ್ಲಿ ಒಲವ ಸಲಿಗೆ ಬೆಳೆಯಿತು
ವರ್ಷದಂತ್ಯಕೆ ಮನದಿ ಮಾಡುವೆ ಮುಗಿಯಿತು


ಹೂವ ವನವ ಸುತ್ತುತ ಪ್ರೇಮ ಲ
ಜಡಿಮಳೆಲಿ ನೆನೆಯುತ ಪ್ರೀತಿ
ಹುಕ್ಕಿ ಹೋಯಿತು ಕೊನೆಗೆ ಮನೆಗೆ ಸೇರಿತು

ಅಪ್ಪ ರೇಗಿತು, ಅಮ್ಮನಳಲು ಕೂಗಿತು
ಅಣ್ಣನ ಕಿಡಿಯು ಕಾರುತ
ಒಲವ ಕುಸ್ತಿ ಸಾರಿತು

ವಿರಹ ಗೀತೆಯಾಯಿತು, ಒದೆಯುವಾಟವಾಗಿತು
ಮಧುರ ಒಲವು ಗೆದ್ದಿತು
ಕೊನೆಗೆ ಸಿನಿಮ ಮುಗಿಯಿತು
-- ಶುಭಂ

Wednesday, 10 March 2010

ನುಡಿ ನಡೆ


ನುಡಿಯೇ ವಸಂತ, ನಡೆಯೇ ಅನಂತ
ಗಡಿಯ ಭಯವೇಕೆ ಅದಕೆ
ಮಡಿಯೇ ತಾನಾಗಿ ಗುಡಿಗೆ ಬರುವಾಗ
ಪೂಜಾರಿ ನಿನಗೇಕೆ ಬಯಕೆ

ಮನಸು ಶ್ರೀಗಂಧ, ಹೃದಯ ಹೂವಂದ
ಗಿಡದ ಹೂವೇನು ಚೆಂದ
ಭಕುತಿ ತಾನಾಗಿ ಹರಿದು ಬರುವಾಗ
ತೋರಿಕೆ ಮಾತೇಕೆ ಕಂದ


ನುಡಿಯ ನುಡಿದಂತೆ ನಡೆದು ಬರುವಾಗ
ಜಗದ ಭಯವೇಕೆ ನಿನಗೆ
ದೇವರೆ ಎಂದೆಂದು ಜೊತೆಯಲ್ಲಿ ಇರುವಾಗ
ಎಡವೋ ಕನಸೇಕೆ ಮನಸೆ

ನವ ನೀತಿ


ಈ ಜನ್ಮವೊಂದು ಕೊಳ್ಳುವ ಸಂತೆ
ಇಲ್ಲಿ ದುಡಿಯುವೆಯೋ ಇಲ್ಲ ಕಳೆಯುವೆಯೋ ಇದು ನಿನ್ನಯಾ ಕಂತೆ
ಆ ಕಂತೆ ಕಟ್ಟುತಾ ಚಿಂತೆ ಮರೆಯುತಾ ನಡೆಯುವುದೇ ಬಾಳು
ಕಲಕಿ ನೋಡುವೆನೆಂದರೆ ಬರಿ ಗೋಳು

ಈ ಭೂಮಿಯೊಂದು ರಂಗಮಂಟಪದಂತೆ
ಇಲ್ಲಿ ಸುಮ್ಮನಿರುವೆಯೋ ಇಲ್ಲ ಬಣ್ಣ ಬಳಿಯುವೆಯೋ ನೀ ಪಾತ್ರಧಾರಿಯಂತೆ
ನೀ ಆ ನಟನೆಯ ನಿರ್ವಹಿಸುವುದೇ ಧರ್ಮ
ಎದುರೋರಟರೆ ಇಲ್ಲ ಜನ್ಮ

ಆ ಜನರ ಹೃದಯ ಕಲ್ಲು ಬಂಡೆಯಂತೆ
ಹೂವ ಎಸೆಯುವೆಯೋ ಉಳಿ ಹೊಡೆಯುವೆಯೋ ಯೋಚಿಸು ನಿನ್ನ ಮನಸಿನಂತೆ
ಧೃಡಕವಚ ತೊಟ್ಟು ಹೋರಾಡುವುದೇ ಬಾಳು
ಅರಿತು ನಡೆದರೆ ಗೆಲುವು

ಹಸಿರು ಪ್ರಿಯತಮೆ










ನಾಚಿ ಹೋಗಿದೆ ಹಸಿರು ನಾಚಿ ಹೋಗಿದೆ
ಆ ಬೀಸೋ ಗಾಳಿಗೆ, ತಂಗಾಳಿ ಸ್ಪರ್ಶಕೆ
ನಾಚಿ ಕೆನ್ನೆ ತುಂಬಿ ಹೋಗಿದೆ

ಆ ರೆಂಬೆ ಕೊಂಬೆಯು ಕೈ ಕರೆದು ನಿಂತಿದೆ
ಕನಸ ಕಂಡಿದೆ, ಮೈ ಮರೆತು ಹೋಗಿದೆ
ಪ್ರಿಯನನ್ನು ನೆನೆದು ನೊಂದು ನಿಂದಿದೆ

ಅಲುಗಾಡೋ ರೀತಿಯು ಹೆಣ್ಣ ಸೊಂಟದಂತಿದೆ
ಸೂರ್ಯಕಿರಣವು ಪ್ರಿಯನ ಮುತ್ತಿನಂತಿದೆ
ಆ ಬೀಸೋ ಗಾಳಿಯು ಅಪ್ಪೋ ರೀತಿಯಂತಿದೆ

ಆ ಮಳೆಯ ಸೇರಲು, ಹೂ ಮಳೆಯ ನೀಡಲು
ನೆಲದಿ ಹಸಿರು ಹಾಸಿದೆ
ಜಗಕೆ ಉಸಿರ ನೀಡಿದೆ