Friday, 9 April 2010

ಅಂದು, ಇಂದು ಮತ್ತು ಮುಂದೆ ?

ಆಡಿದ ದಿನಗಳು, ನೋಡಿದ ಜನಗಳು
ಕಾಡುವ ಮನಗಳವೆಷ್ಟೋ
ಭಾವಾನತರಂಗದಲಿ ಜೀವಾತ್ಮನನು ತಂದ
ಮಾಸದ ಕ್ಷಣಗಳವೆಷ್ಟೋ


ಅಂದು ಬಾಲಕನಿದ್ದೆ, ಇಂದು ನಾವಿಕನಾದೆ
ಚಂದವಿತ್ತು ದಾರಿ ಹೂವನಗಳಲಿ
ಮಂದ ಬೆಳಕೂ ಇತ್ತು, ತುಂಬು ಚಂದಿರನಿತ್ತು
ಕಂದರದಿ ಛಲವಿತ್ತು ಅಂದದಲಿ ಅರಿವಿತ್ತು

ಚಂಚಲನೆದೆ ಹಣ್ಣು, ಮಂಥನದಲೆ ಕಣ್ಣು
ತಂತು ಬಡಿದವವೆಷ್ಟೋ ಅಂತರವಿರದೆ
ಕಂತುಗಳವು ತೀರಿ, ಸಂತೆಗಳ ತಾ ಹಾರಿ
ಅರಿವಿನಂತವನೇರಲೆಷ್ಟೋ ದಿನವು

ಹಂತ ಹಂತವು ಪಾಠ, ಚಿಂತನೆಯು ರಸದೂಟ
ಬದುಕಿನರ್ಥವು ಮರ್ಮ ಕಲಕಬೇಡ
ಅರಿತು ನಡೆ, ಕಲಿತು ನುಡಿ
ಹರಸಿ ಹೊಳೆ, ಮರೆತು ನಗು ನಾ ಕಲಿತುದಿಷ್ಟೇ



1 comment:

Unknown said...

Great Chandru...

You are not a poet of time-pass....The way the u nurtured cleraly indicate you have dense vocabulary synchronized with inquisitive soul...

my request is, never stop this expressions...

God will by default bless you, he wl become fan for ur words...